Saturday, January 9, 2010

Common sense

ಜೆಡಿಎಸ್ ರಾಜ್ಯ ಅಧ್ಯಕ್ಷ ಮೆರಾಜುದ್ದೀನ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅಲ್ಪ ಸಂಖ್ಯಾತರನ್ನು ಓಲೈಸುವುದಕ್ಕಾಗಿ ದೇವೇಗೌಡರು ಬಳಸಿದ 'ದಾಳ' ಎಂದೇ ರಾಜ್ಯದ ತುಂಬೆಲ್ಲ ಮೆರಾಜ್ ಚಿರಪರಿಚಿತರು. ಹೆಸರಿಗೆ ಜೆಡಿಎಸ್ ರಾಜ್ಯ ಅಧ್ಯಕ್ಷರಾಗಿದ್ದರೂ ಅವರಿಗೆ ಯಾವುದೇ ಆಥರ್ಿಕ ಹೊಣೆಗಾರಿಕೆಯನ್ನು ಜೆಡಿಎಸ್ ಅಥವಾ ಗೌಡರ ಕುಟುಂಬ ವಹಿಸಿರಲಿಲ್ಲ.
ದೇವೇಗೌಡರ ರಾಜಕೀಯ ಆಟಗಳಿಗೆ ಒತ್ತಾಸೆಯಾಗಿ ನಿಂತು ಹೇಳಿದಂತೆ ಪಾಲಿಸುವ 'ಹುಡುಗ' ಮೆರಾಜುದ್ದೀನ್ ಬೀದರ್ನ ಮತ್ತು ಅವರು ಪ್ರತಿನಿಧಿಸುತ್ತಿದ್ದ ಹುಮನಾಬಾದ್ ಕ್ಷೇತ್ರದ ಜನತೆಗೆ ಬೇರೆಯದೇ ರೀತಿಯಲ್ಲಿ ಕಾಣಿಸುತ್ತಾರೆ. ಕೇವಲ 'ಮೆರಾಜ್ ಇಲ್ಲ'ವಾಗಿದ್ದಾರೆ ಎನ್ನುವ ಒಂದೇ ಕಾರಣಕ್ಕಾಗಿ ಅವರ ಬಗ್ಗೆ ಒಳ್ಳೆಯ ಮಾತುಗಳನ್ನು ಆಡುವ ಅಗತ್ಯವಿಲ್ಲ. ಮಾಧ್ಯಮದವರೂ ಸೇರಿದಂತೆ ಕನ್ನಡದ ಬಹುಪಾಲು ಜನರಿಗೆ ಅಪರಿಚಿತವಾಗಿದ್ದ ಹುಮನಾಬಾದ್ ಮೆರಾಜ್ ಅವರನ್ನು ಪರಿಚಯಿಸುವ ಪ್ರಯತ್ನವಿದು.

ಮೇಲ್ನೋಟಕ್ಕೆ ಮೊದ್ದು ಮೊದ್ದಾಗಿ ವತರ್ಿಸಿದಂತೆ ಕಾಣಿಸುತ್ತಿದ್ದ ಮೆರಾಜುದ್ದೀನ್ ಅವರು ಅತ್ಯಂತ ಚಾಣಾಕ್ಷ್ಯ ರಾಜಕಾರಣಿಯಾಗಿದ್ದರು ಎನ್ನುವ ಸಂಗತಿ ಬಹಳಷ್ಟು ಜನರಿಗೆ ಗೊತ್ತಿಲ್ಲ. ಉದರ್ು ಧಾಟಿಯ ಕನ್ನಡದಲ್ಲಿ ಮಾತನಾಡುತ್ತ ಕೇಳುಗರಲ್ಲಿ ನಗೆಯ ಅಲೆ ಹುಟ್ಟಿಸುತ್ತಿದ್ದ ಅವರು ಜನಪರ ಕಾಳಜಿಯ, ಹೃದಯವಂತ ಸಂಪನ್ನ ವ್ಯಕ್ತಿಯಾಗಿದ್ದರು. ಅವರ ನಡೆ- ನುಡಿ ಎಲ್ಲವು ಸರಳ ಮತ್ತು ನೇರ. ಬಹುತೇಕ ಎಲ್ಲ ರಾಜಕಾರಣಿಗಳ ಹಾಗೆ ಘಟನೆಯೊಂದನ್ನು ತಮಗೆ ಬೇಕಾದ ಹಾಗೆ ವ್ಯಾಖ್ಯಾನಿಸುವ ಕೌಶಲ್ಯ ಪಡೆದಿದ್ದ ಅವರ ಹೇಳಿಕೆ ಮತ್ತು ಮಾತುಗಳಲ್ಲಿ ಅಪ್ರಮಾಣಿಕತೆ ಇರುತ್ತಿರಲಿಲ್ಲ. ನಂಬಿರುವುದನ್ನೇ ಮಾತನಾಡುತ್ತಿದ್ದರು ಮತ್ತು ಮಾತನಾಡುವುದನ್ನೇ ನಂಬಿರುತ್ತಿದ್ದರು. ಜೆಡಿಎಸ್ ರಾಜ್ಯ ಅಧ್ಯಕ್ಷರಾದ ಮೇಲೆ ಯಾರು ಎಷ್ಟೇ ಕಿಚಾಯಿಸಿದರೂ ಅದನ್ನು ಗಂಭೀರವಾಗಿ ಪರಿಗಣಿಸದೇ ಸಮಥರ್ಿಸಿಕೊಳ್ಳುವ ಧಾಟಿಯಲ್ಲಿ ಮಾತನಾಡುತ್ತಿದ್ದರು. ಮೆರಾಜುದ್ದೀನ್ ಅವರಂತಹ ಚಾಣಾಕ್ಷ್ಯ ಮತ್ತು ಜನರ ನೋವಿಗೆ ಮಿಡಿಯುವ, ಚಿಂತಿಸುವ ರಾಜಕಾರಣಿಗಳು ಅಪರೂಪ. ಪಕ್ಷದ ಹೆಸರಿನ ಜೊತೆಗಿದ್ದ ಸೆಕ್ಯುಲರ್ ಪದವನ್ನು 'ತತ್ವ' ಎಂದು ನಂಬಿದ್ದ ಅವರು ಅದಕ್ಕೆ ಅನುಗುಣವಾಗಿಯೇ ನಡೆದುಕೊಳ್ಳುತ್ತಿದ್ದರು. ಹಾಗೆಯೇ ಇಸ್ಲಾಂನಲ್ಲಿ ಅಪಾರ ನಂಬಿಕೆ ಇಟ್ಟಿದ್ದ ಅವರು ಸಚ್ಚಾರಿತ್ರ್ಯವಂತ, ನೇಕಿ ಇರುವ ಮುಸ್ಲಿಮನಾಗಿದ್ದರು.

ಅವರ ವ್ಯಕ್ತಿತ್ವವನ್ನು ಪರಿಚಯಿಸುವ ಒಂದೆರಡು ಘಟನೆಗಳನ್ನು ಇಲ್ಲಿ ಪ್ರಸ್ತಾಪಿಸಲೇಬೇಕು. ಮೆರಾಜ್ ಎಲ್ಲ ರಾಜಕಾರಣಿಗಳ ಹಾಗೆ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿಕೊಳ್ಳುತ್ತಿರಲಿಲ್ಲ. ಬಡತನದ ಹಿನ್ನೆಲೆಯಿಂದ ಬಂದದ್ದರಿಂದ ಅವರಿಗೆ ಬಡತನ ಅಂದರೆ ಏನು ಎಂದು ಚೆನ್ನಾಗಿ ಗೊತ್ತಿತ್ತು. ಹಾಗಾಗಿಯೇ ತಮ್ಮ ಸುತ್ತ ಬಡವರು ಬಂದು ನಿಂತರೆ ಅವರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಓಡಿ ಹೋಗುತ್ತಿರಲಿಲ್ಲ. ಸಾಧ್ಯವಾದಷ್ಟು ಅಂದರೆ ಕೈಲಾದಷ್ಟು ಸಹಾಯ ಮಾಡಿ ಕಳುಹಿಸುತ್ತಿದ್ದರು. ಅವರ ಮನೆಯಿಂದ ಬರಿಗೈಯಲ್ಲಿ ಬಂದ ಬಡವರು ಇಲ್ಲವೇ ಇಲ್ಲ.
ಹುಮನಾಬಾದ್ ಬಸ್ ನಿಲ್ದಾಣದ ಹತ್ತಿರದಲ್ಲಿಯೇ ಮೆರಾಜ್ ಅವರ ಮನೆಯಿದೆ. 2006 ಸೆಪ್ಟೆಂಬರ್ 19 ಮೆರಾಜ್ ಮನೆಯ ಮುಂದೆ ಜನರ ಸರದಿ ಸಾಲು. ಅವರು ಮನೆಯಲ್ಲಿ ಇದ್ದಾರೆ ಅಂದರೆ ಹಾಗೆ ಜನ ನೆರೆಯುವುದರಲ್ಲಿ ಯಾವುದೇ ವಿಶೇಷ ಇರುತ್ತಿರಲಿಲ್ಲ. ಆದರೆ, ಮಾಮೂಲಿಗಿಂತ ಹೆಚ್ಚು ಜನ ಸೇರಿದ್ದು ನೋಡಿ ಏನಿರಬಹುದು ಎಂದು ವಿಚಾರಿಸಿದರೆ ಅಂದು ಮೆರಾಜ್ ಹುಟ್ಟುಹಬ್ಬ. ಅದಕ್ಕಾಗಿ ಬಡವರಿಗೆ ಸೀರೆ, ಬಟ್ಟೆ ವಸ್ತ್ರ ಹಂಚುತ್ತಿದ್ದರು. ಆದರೆ, ಮಾಧ್ಯಮಗಳಲ್ಲಿ ಆ ಬಗ್ಗೆ ಒಂದು ಸಾಲಿನ ಪ್ರಸ್ತಾಪವೂ ಇರಲಿಲ್ಲ. ಸುಮಾರು 500ಕ್ಕೂ ಹೆಚ್ಚು ಮಹಿಳೆಯರಿಗೆ ಉಚಿತವಾಗಿ ಸೀರೆ ಹಂಚಿದ್ದ ಮೆರಾಜ್ ಅದನ್ನು ಮಾಧ್ಯಮದವರಿಗೆ ತಿಳಿಸಿ ಪ್ರಚಾರ ಮತ್ತು ಲಾಭ ಪಡೆಯಲು ಬಯಸಿರಲಿಲ್ಲ. ಬರಿ ಸೀರೆ- ಬಟ್ಟೆ ಹಂಚುವುದು ಮಾತ್ರವಲ್ಲದೇ ಉಚಿತ ಆರೋಗ್ಯ ತಪಾಸಣಾ ಶಿಬಿರ, ನೇತ್ರ ಶಸ್ತ್ರಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸುತ್ತಿದ್ದರು. ಹಾಗಂತ ಮಾಧ್ಯಮದವರಿಂದ ಮತ್ತು ಪ್ರಚಾರದಿಂದ ದೂರ ಓಡಿ ಹೋಗುತ್ತಿದ್ದರು ಅಂತೇನು ಅಲ್ಲ. ಬಲಗೈಯಿಂದ ಕೊಟ್ಟದ್ದು ಎಡಗೈಗೆ ಗೊತ್ತಾಗಬಾರದು ಎಂದು ಬಲವಾಗಿ ನಂಬಿದ್ದರು.ತಮ್ಮ ಜನಪರ ಕೆಲಸಗಳನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳಲು ಬಯಸುತ್ತಿರಲಿಲ್ಲ ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ.
ಸಾರ್ವಜನಿಕ ಸಭೆಯೊಂದರಲ್ಲಿ ಅವರು ಪ್ರಸ್ತಾಪಿಸಿದ ಒಂದು ಘಟನೆ ಅವರ ಕಳಕಳಿಯನ್ನು ಬಿಂಬಿಸುತ್ತದೆ. ಮನೆಯಿಂದ ಹೊರಟಾಗ ಒಬ್ಬ ಬಡ ಮತ್ತು ಅನಾಥ ಹುಡುಗಿ ಬಂದು ಭೇಟಿಯಾದಳು. ಸಹಾಯಹಸ್ತ ಚಾಚುವಂತೆ ಗೋಗರೆದಳು. ನಾನು ಅವಳ ತಲೆಯ ಮೇಲೆ ಎಡಗೈ ಇಟ್ಟು ಸಾಂತ್ವನ ಹೇಳಿದೆ. ಕಷ್ಟದಲ್ಲಿ ಇರುವವರಿಗೆ ಸಹಾಯಹಸ್ತ ಚಾಚುವಾಗ ಬಲಗೈ ಬಳಸಬೇಡ. ಅದರ ಭಾರ ತಡೆಯುವ ಶಕ್ತಿ ಅವರಿಗಿರುವುದಿಲ್ಲ. ಹಾಗಂತ ಇಸ್ಲಾಂನಲ್ಲಿದೆ ಎಂದರು. ಈ ಸಂಗತಿ ಕುರಾನ್ ಅಥವಾ ಇಸ್ಲಾಂನ ಯಾವುದಾದರೂ ಪುಸ್ತಕಗಳಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ. ತಮಗಿರುವ ಸಾಮಾಜಿಕ ಕಳಕಳಿಯನ್ನು ಅದರ ಎಲ್ಲ ತಾತ್ವಿಕ ನೆಲೆಗಳನ್ನು ಅರಿತವರಂತೆ ಪ್ರಸ್ತುತ ಪಡಿಸುತ್ತಿದ್ದರು.

ರಾಜಕಾರಣಿಗಳು ತಮ್ಮ ರಾಜಕೀಯದ ದೊಂಬರಾಟವಾಗಿ ಎಲ್ಲ ಜಾತಿ, ಸಮುದಾಯದ ಹಬ್ಬ ಆಚರಣೆಗಳಲ್ಲಿ ಭಾಗವಹಿಸುವುದು ಮಾಮೂಲಿ ಸಂಗತಿ. ಮೆರಾಜುದ್ದೀನ್ ಕೂಡ ಯಾವುದೇ ಜಾತಿ/ಪಂಗಡದವರು ಕರೆದರೂ ಹೋಗುತ್ತಿದ್ದರು. ಮಾತ್ರವಲ್ಲ ವ್ಯಕ್ತಿಯಾಗಿ, ಜನಪ್ರತಿನಿಧಿಯಾಗಿ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದರು. ಹುಮನಾಬಾದ್ನಲ್ಲಿ ಒಂದು ರಕ್ಷಾಬಂಧನ ಸಮಾರಂಭದಲ್ಲಿ ಮೆರಾಜ್ ಭಾಗವಹಿಸಿದ್ದರು.ಸಾಮೂಹಿಕವಾಗಿ ರಾಖಿ ಕಟ್ಟುವ ಸಮಾರಂಭ ಅದಾಗಿತ್ತು. ದೇವಾಲಯವೊಂದರಲ್ಲಿ ನಡೆದ ಆ ಸಮಾರಂಭಕ್ಕೆ ಶಾಸಕರಾಗಿದ್ದ ಮೆರಾಜ್ ಅವರನ್ನು ಆಹ್ವಾನಿಸಲಾಗಿತ್ತು. ಇಂತಹ ಸಮಾರಂಭದಲ್ಲಿ ಸಾಮಾನ್ಯವಾಗಿ ಸಾಂಕೇತಿಕವಾಗಿ ಒಬ್ಬರು ರಾಖಿ ಕಟ್ಟುತ್ತಾರೆ. ಆ ದಿನವೂ ಹಾಗೆಯೇ ಆಯಿತು. ರಾಖಿ ಕಟ್ಟಿದವರಿಗೆ ಮೆರಾಜ್ 500 ರೂಪಾಯಿಯ ನೋಟು ನೀಡಿದರು. ಹಣ ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಅಲ್ಲಿದ್ದವರೆಲ್ಲ ನಾ ಮುಂದು ತಾ ಮುಂದು ಎಂದು ರಾಖಿ ಕಟ್ಟಲು ಆರಂಭಿಸಿದರು. ಎಲ್ಲರಿಗೂ ಹಣ ನೀಡಿದರು. ಕೈಯಲ್ಲಿ ಹಣ ಖಾಲಿಯಾದಾಗ ಮತ್ತೆ ತರಿಸಿ ನೀಡಿದರು. ನಂತರ ಆ ದಿನ ಸಭೆಯಲ್ಲಿ ಮಾತನಾಡಿದ ಮೆರಾಜ್ ಹೇಳಿದ್ದು 'ನೀವು ನನಗೆ ಸಹೋದರ ಅಂತ ರಾಖಿ ಕಟ್ಟಿದಿರಿ. ಅದಕ್ಕೆ ಪ್ರತಿಯಾಗಿ ಅಣ್ಣ ತನ್ನ ತಂಗಿಗೆ ನೀಡುವ ಉಡುಗೊರೆಯಾಗಿ ನಾನು ಏನನ್ನು ಕೊಡಬೇಕೊ ಅದನ್ನು ಕೊಟ್ಟಿದ್ದೇನೆ. ಇದಕ್ಕು ಚುನಾವಣೆಗೂ ಮತ್ತು ರಾಜಕೀಯ ಯಾವುದೇ ಸಂಬಂಧ ಇಲ್ಲ' ಎಂದು ಹೇಳಿದರು. ಮೆರಾಜ್ ಕೇವಲ ಹೇಳಿದರು ಮಾತ್ರವಲ್ಲ ಅದನ್ನು ನಂಬಿದ್ದರು ಕೂಡ.

ಸಣ್ಣ ಪುಟ್ಟ ಸಮುದಾಯದ ಜನರ ಹಿತಾಸಕ್ತಿ ಕಾಪಾಡುವಲ್ಲಿ ಶ್ರಮಿಸುತ್ತಿದ್ದ ಮೆರಾಜ್ ಮೇಲ್ವರ್ಗದ ಶಕ್ತಿಶಾಲಿ ರಾಜಕಾರಣಿಗಳಿಗೆ ಸೆಡ್ಡು ಹೊಡೆದು ಆ ಮೂಲಕವೇ ತಮ್ಮ ಅಸ್ತಿತ್ವ ಸಾಬೀತು ಪಡಿಸಿದ್ದರು. ಎದುರಿಸಿದ ಐದು ಚುನಾವಣೆಗಳ ಪೈಕಿ ಮೂರರಲ್ಲಿ ಸೋತು ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ರಾಜಕಾರಣ ಮಾಡುತ್ತಿದ್ದಾಗ ಮತ್ತು ಮಾತನಾಡುತ್ತಿದ್ದಾಗಲೂ ಸಭ್ಯತೆಯ ಎಲ್ಲೆ ಮೀರಿ ಟೀಕೆ ಮಾಡುತ್ತಿರಲಿಲ್ಲ. ಅದಕ್ಕೆ ಬದಲಾಗಿ ಎದುರಾಳಿಗಳು ಮಾತ್ರ ಮೆರಾಜ್ ಅವರ ನೆಮ್ಮದಿ ಕೆಡಿಸುವುದೇ ರಾಜಕಾರಣದ ಗುರಿ ಆಗಿಸಿಕೊಂಡಿದ್ದರು. ಮೆರಾಜ್ ಅವರ ಮನೆಯ ಮುಂಭಾಗದಲ್ಲಿ ಮೆರಾಜ್ ಮನೆಗಿಂತ ಎತ್ತರದ ಮನೆ ನಿಮರ್ಿಸುವಂತೆ ನೋಡಿಕೊಂಡಿದ್ದ ಎದುರಾಳಿ ಕಾಂಗ್ರೆಸ್ ನಾಯಕರ ಸಣ್ಣತನಗಳನ್ನು ನೋಡಿ ಮೆರಾಜ್ ನಕ್ಕು ಬಿಡುತ್ತಿದ್ದರು. ಅದು ಮೆರಾಜ್ಗೆ ಮಾತ್ರ ಸಾಧ್ಯವಿತ್ತು.

ಬೀದರ್ ತಾಲ್ಲೂಕಿನ ಹೊಚಕನಹಳ್ಳಿ ಗ್ರಾಮದಲ್ಲಿ 1958ರ ಸೆಪ್ಟೆಂಬರ್ 19 ರಂದು ಜನಿಸಿದ ಮೆರಾಜುದ್ದೀನ್ ಬಡತನದ ಹಿನ್ನೆಲೆಯಿಂದ ಬಂದವರು. ಅವರ ತಂದೆ ನಿಜಾಮುದ್ದೀನ್ ಕೃಷಿಕರಾಗಿದ್ದರು. ರೇಕುಳಗಿ ಮಂಡಲ ಪಂಚಾಯತ್ ಸದಸ್ಯನಾಗಿ ಆಯ್ಕೆಯಾಗುವ ಮೂಲಕ ಸಕ್ರಿಯ ರಾಜಕಾರಣದಲ್ಲಿ ಕಾಣಿಸಿಕೊಂಡ ಅವರಿಗೆ ಕಾಶಿನಾಥ ಬೇಲೂರೆ ಅವರಂತಹ ಸಮಾಜವಾದಿ ನಾಯಕರ ಬೆಂಬಲ ಇತ್ತು. ಎರಡು ಅವಧಿಗೆ ಡಿಸಿಸಿ ಬ್ಯಾಂಕ್ ನಿದರ್ೇಶಕರಾಗಿ ಚುನಾಯಿತರಾಗಿದ್ದ ಮೆರಾಜ್ ಮೊದಲ ಬಾರಿಗೆ 1994ರಲ್ಲಿ ಎದುರಿಸಿದ ಚುನಾವಣೆಯಲ್ಲಿಯೇ ಜಯಭೇರಿ ಬಾರಿಸಿದ್ದರು. ಸತತವಾಗಿ ನಾಲ್ಕು ಬಾರಿ ಹುಮನಾಬಾದ್ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಕಾಂಗ್ರೆಸಿನ ಬಸವರಾಜ ಪಾಟೀಲ ಅವರನ್ನು ಸೋಲಿಸಿದ್ದರು. ಬೀದರ್ನಂತ ಫ್ಯೂಡಲ್ ಜಿಲ್ಲೆಯಲ್ಲಿ ಮೇಲ್ವರ್ಗದ ಮತ್ತು ಭೂಮಾಲೀಕ ರಾಜಕಾರಣಿಯೊಬ್ಬರನ್ನು ಸೋಲಿಸುವುದು ಸುಲಭದ ಮಾತೇನಾಗಿರಲಿಲ್ಲ. ಜೊತೆಗೆ ಬಸವರಾಜ ಪಾಟೀಲರ ಭಾರಿ ತೋಳ್ಬಲದ ಪಡೆ ಯಾರನ್ನೂ ಬದುಕಲು ಬಿಟ್ಟ ಉದಾಹರಣೆ ಇರಲಿಲ್ಲ. ನಿಜವಾದ ಅರ್ಥದಲ್ಲಿ ಮೆರಾಜುದ್ದೀನ್ ಅವರ ಗೆಲುವು ಸಾಮಾನ್ಯ ವ್ಯಕ್ತಿಯ ಗೆಲುವಾಗಿತ್ತು. ರಾಜಕಾರಣದ ಎಬಿಸಿಡಿ ಕಲಿಯಲು ಆರಂಭಿಸಿದ್ದ ಮೆರಾಜ್ ಹುಮನಾಬಾದ್ನಲ್ಲಿ ಕಾಂಗ್ರೆಸ್ ಸಂಸ್ಕೃತಿಗೆ ಭಿನ್ನವಾದ ವ್ಯಕ್ತಿಯ ಕೊರತೆಯನ್ನು ನೀಗಲು ಪ್ರಯತ್ನಿಸಿದರು. ಬಸವರಾಜ ಪಾಟೀಲರು ಮತ್ತವರ ಮಕ್ಕಳ ದಬ್ಬಾಳಿಕೆಯ ರಾಜಕಾರಣದಿಂದ ರೋಸಿ ಹೋಗಿದ್ದ ಜನ ಮೆರಾಜ್ನಂತಹ ಸರಳ, ನೇರ ಮತ್ತು ಕಿರಿಕಿರಿ ಇಲ್ಲದ ವ್ಯಕ್ತಿಯನ್ನು ನಾಯಕನನ್ನಾಗಿ ನೋಡಲು ಬಯಸಿದ್ದರು.

ಮೊದಲ ಗೆಲುವಿನ ಜೊತೆಯಲ್ಲಿಯೇ ಸಚಿವನಾಗಿ ಅಧಿಕಾರ ಸ್ವೀಕರಿಸುವ ಅವಕಾಶವೂ ಮೆರಾಜ್ಗೆ ಒಲಿದು ಬಂತು. ದೇವೇಗೌಡರ ಸಚಿವ ಸಂಪುಟದಲ್ಲಿ ಬಂದಿಖಾನೆ ಮತ್ತು ಹೋಮ್ ಗಾಡರ್್ ಖಾತೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಗೌಡರು ದೆಹಲಿಗೆ ಹೋದ ಮೇಲೆ ಜೆ.ಎಚ್. ಪಟೇಲ್ ಅವರು ಮುಖ್ಯಮಂತ್ರಿಯಾದರು. ಆಗ ಪೌರಾಡಳಿತ ಸಚಿವರಾದ ಮೆರಾಜ್ ಅವರು ಪುರಸಭೆಯ ನೌಕರರ ಸಮಸ್ಯೆಗಳನ್ನು ಬಗೆ ಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದರು. ಸತತವಾಗಿ ಐದು ವರ್ಷಗಳ ಕಾಲ ಸಚಿವರಾಗಿ ಸೇವೆ ಸಲ್ಲಿಸಿದ ಬೀದರ್ ಜಿಲ್ಲೆಯ ಏಕೈಕ ನಾಯಕ ಅವರಾಗಿದ್ದರು. ಅದನ್ನವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು.

1999ರ ಚುನಾವಣೆಯಲ್ಲಿ ಬಿಜೆಪಿಯ ಸುಭಾಷ ಕಲ್ಲೂರು ಎದುರು ಪರಾಭವ ಅನುಭವಿಸಿದ ಮೆರಾಜ್ಗೆ 2002 ಉಪಚುನಾವಣೆಯಲ್ಲಿಯೂ ವಿಜಯಲಕ್ಷ್ಮಿ ಒಲಿದು ಬರಲಿಲ್ಲ. 2004ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಧರ್ಮಸಿಂಗ್ ನೇತೃತ್ವದ ಸಮ್ಮಿಶ್ರ ಸಕರ್ಾರದಲ್ಲಿ ಸಚಿವರಾಗುವ ಅವಕಾಶ ಪಡೆದರು. ವಕ್ಫ್ ಮತ್ತು ಹಜ್ ಹಾಗೂ ಪಶುಸಂಗೋಪನಾ ಖಾತೆ ಸಚಿವರಾದರು. ಅವರ ಅವಧಿಯಲ್ಲಿಯೇ ಬೀದರ್ನಲ್ಲಿ ಪಶುವೈದ್ಯಕೀಯ ವಿಶ್ವವಿದ್ಯಾಲಯ ಉದ್ಘಾಟನೆಯಾಯಿತು. ಅದು ಕಾಕತಾಳೀಯ. ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ದೇವೇಗೌಡರ ಜೊತೆ ನಿಂತ ಮೆರಾಜುದ್ದೀನ್ ಅದಕ್ಕಾಗಿ ಮಂತ್ರಿ ಪದವಿ ಕಳೆದುಕೊಂಡರು. ಕೊನೆಯ ವರೆಗೂ ದೇವೇಗೌಡರ ಕುಟುಂಬದ ಬಗ್ಗೆ ಅವರಲ್ಲಿ ಎರಡು ಯೋಚನೆ ಇರಲಿಲ್ಲ. ಅದರ ಫಲವಾಗಿಯೇ ಜೆಡಿಎಸ್ ರಾಜ್ಯ ಅಧ್ಯಕ್ಷರಾದರು. ಉಪಮುಖ್ಯಮಂತ್ರಿ ಆಗುವ ಅವಕಾಶ ಒಲಿದು ಬಂದಿತ್ತಾದರೂ ಕೊನೆ ಗಳಿಗೆಯಲ್ಲಿ ಕೈತಪ್ಪಿ ಹೋಯಿತು.
ಮೆರಾಜುದ್ದೀನ್ ತಮಗೆ ದೊರೆತ ಅಧಿಕಾರ ಮತ್ತು ಅವಕಾಶವನ್ನು ಜನಪರ ಕಾಳಜಿಯಿಂದ ಬಳಸಿದರು ಎನ್ನುವುದಕ್ಕೆ ಹಲವಾರು ಉದಾಹರಣೆಗಳಿವೆ. ಮೇಲ್ವರ್ಗದವರ ತುಳಿಯುವ ರಾಜಕಾರಣದಿಂದ ತಮ್ಮನ್ನು ರಕ್ಷಿಸಿಕೊಳ್ಳುತ್ತ ಅಸ್ತಿತ್ವ ಉಳಿಸಿಕೊಳ್ಳುವ ಹೆಣಗಾಟ ಮಾಡಬೇಕಾಗಿದ್ದ ಅವರು ಹಾಗಂತ ಗೋಳಾಡುತ್ತ, ಮರುಕ- ಕರುಣೆಯ ಭಿಕ್ಷೆ ಬೇಡಿ ಬದುಕುವ ರಾಜಕಾರಣ ಮಾಡಲಿಲ್ಲ.

ಬೀದರ್ ಜಿಲ್ಲೆಯ ರೈತರ ಅದರಲ್ಲೂ ಕಬ್ಬು ಬೆಳೆಗಾರರಿಗೆ ಏಕೈಕ ಆಸರೆಯಾಗಿದ್ದ ಬೀದರ್ ಸಹಕಾರ ಸಕ್ಕರೆ ಕಾಖರ್ಾನೆ (ಬಿಎಸ್ಎಸ್ಕೆ) ಸಂಕಷ್ಟದಲ್ಲಿದ್ದ ದಿನಗಳಲ್ಲಿ ದೇವೇಗೌಡರು ಅದರ ಹೊಣೆಯನ್ನು ಮೆರಾಜ್ಗೆಗೆ ವಗರ್ಾಯಿಸಿದರು. ಅಪಾರ ಚಾಕಚಕ್ಯತೆ ಮತ್ತು ಕಾರ್ಯಕ್ಷಮತೆಯಿಂದಾಗಿ ಜಿಲ್ಲೆಯಲ್ಲಿದ್ದ ಏಕೈಕ ಸಹಕಾರ ಸಕ್ಕರೆ ಕಾಖರ್ಾನೆಯನ್ನು ಉಳಿಸುವಲ್ಲಿ ಅಪಾರ ಶ್ರಮಪಟ್ಟ ಮೆರಾಜ್ ಮತ್ತು ಅದು ಬದುಕಿ ತನ್ನ ಕಾಲ ಮೇಲೆ ನಿಲ್ಲುವಂತಾಗುವಂತೆ ರೂಪಿಸಿದರು. ಮೇಲ್ವರ್ಗದ ಜಾತಿ ರಾಜಕಾರಣ ಅವರನ್ನು ಅಲ್ಲಿ ಹೆಚ್ಚುದಿನ ಮುಂದುವರೆಯಲು ಬಿಡಲಿಲ್ಲ. ಬಿಎಸ್ಎಸ್ಕೆ ನೆಲೆ ಕಂಡುಕೊಳ್ಳುತ್ತಿದ್ದಂತೆಯೇ ಪ್ರಬಲರು ಮತ್ತೆ ವಕ್ಕರಿಸಿದರು.

ಪ್ರಬಲರಿಂದ ಬಡವರಿಗೆ ಆಗುತ್ತಿದ್ದ ಶೋಷಣೆ ತಪ್ಪಿಸುವುದಕ್ಕಾಗಿ ಮೆರಾಜ್ ಖಾಸಗಿ ಸಕ್ಕರೆ ಕಾಖರ್ಾನೆ ತೆರೆಯಲು ನಿರ್ಧರಿಸಿದರು. ಆ ಮೂಲಕ ಜನ ಮತ್ತು ಜಾತಿಯ ಬಲದಿಂದ ಸವರ್ಾಧಿಕಾರಿಗಳಂತೆ ಮೆರೆಯುತ್ತಿದ್ದ ಸಹಕಾರ ಕ್ಷೇತ್ರದ ಜನರು ಎದುರು ಸವಾಲು ಒಡ್ಡಿದರು. ಬೀದರ್ ಕಿಸಾನ್ ಸಹಕಾರ ಸಕ್ಕರೆ ಕಾಖರ್ಾನೆಗಾಗಿ ಷೇರು ಮಾರಾಟ ಮಾಡಿದ ಮೆರಾಜ್ ಅವರಿಗಿಂತ ವಿರೋಧಿಗಳ ಕೈ ಮೇಲಾದದ್ದರಿಂದ ಕೊನೆಯ ಗಳಿಗೆಯಲ್ಲಿ ಇಡೀ ಯೋಜನೆ ತಲೆ ಕೆಳಗಾಯಿತು. ರೈತರಿಂದ ಪಡೆದ ಹಣಕ್ಕಿಂತ ಹೆಚ್ಚು ಹಣವನ್ನು ಅಥವಾ ಇಡೀ ತಮ್ಮ ರಾಜಕೀಯ ಜೀವನದ ಶಕ್ತಿ -ಸಾಮಥ್ರ್ಯವನ್ನು ಬಿಕೆಎಸ್ಕೆ ಆರಂಭಿಸುವುದಕ್ಕೆ ಹೆಣಗಾಡಿದರು. ಪ್ರಬಲರ ಎದುರು ಮೆರಾಜ್ ಆಟ ನಡೆಯಲಿಲ್ಲ. ರೈತರ ಹಣ ತಿಂದಿದ್ದಾರೆ ಎಂಬ ಮಾಡದ ತಪ್ಪಿನ ಹೊರೆ ಹೊರಬೇಕಾಯಿತು. ದೊಡ್ಡ ನಾಯಕರು ತಮ್ಮ ಕೈಗೆ ಹತ್ತಿದ್ದ ಮಸಿಯನ್ನು ಮೆರಾಜ್ ಮುಖಕ್ಕೆ ಬಳಿಯುವ ಭರದಲ್ಲಿ ಸಕ್ಕರೆ ಕಾಖರ್ಾನೆಯೇ ಆರಂಭವಾಗದಂತೆ ನೋಡಿಕೊಂಡರು. ಇದೆಲ್ಲದರಿಂದ ಜಿಲ್ಲೆಯ ರೈತರಿಗೆ ಪರೋಕ್ಷ ಲಾಭವೇ ಆಯಿತು. ಮತ್ತೊಂದು ಸಕ್ಕರೆ ಕಾಖರ್ಾನೆಯ ಅಗತ್ಯ ಇರುವುದನ್ನು ಸಾಬೀತು ಮಾಡುವಲ್ಲಿ ಮೆರಾಜುದ್ದೀನ್ ಅವರು ಯಶಸ್ವಿಯಾದರು. ನಂತರದ ಕೆಲವೇ ವರ್ಷಗಳಲ್ಲಿ 'ದೊಡ್ಡ ಶಕ್ತಿಗಳು' ಬೀದರ್ ಜಿಲ್ಲೆಯಲ್ಲಿ ಎರಡು ಸಹಕಾರಿ ಸಕ್ಕರೆ ಕಾಖರ್ಾನೆ ಆರಂಭಿಸಿ ತಮ್ಮ ಸಾಮಥ್ರ್ಯ ಮತ್ತು ಪ್ರಾಬಲ್ಯ ತೋರಿಸಿದರು. ತನ್ನ ಹೆಸರು ಕೆಟ್ಟರೂ ರೈತರಿಗೆ ಲಾಭವಾದದ್ದಕ್ಕೆ ಮೆರಾಜ್ ಒಳಗೊಳಗೆ ಮುಗಳ್ನಗುತ್ತಿದ್ದರು. ಸಾರ್ವಜನಿಕವಾಗಿ ಮಾತನಾಡುವಾಗ ಮಾತ್ರ ಬಿ.ಕೆ.ಎಸ್.ಕೆಯ ಕಳಂಕ ಅವರನ್ನು ಘಾಸಿಗೊಳಿಸುತ್ತಿತ್ತು. ಸಕ್ಕರೆ ಕಾಖರ್ಾನೆಗಾಗಿ ಡಿ.ಸಿ.ಸಿ. ಬ್ಯಾಂಕ್ನಲ್ಲಿ ಮಾಡಿದ ಸಾಲ ಇನ್ನೂ ಅವರ ತಲೆಯ ಮೇಲಿದೆ. ಜನಪರ ಕೆಲಸ ಮಾಡಲು ಹೋಗುವವರಿಗೆ ಬಿಕೆಎಸ್ಕೆ ಒಂದು ಎಚ್ಚರಿಕೆಯ ಪಾಠ.
ಮೊನ್ನಿನ ಚುನಾವಣೆಗೆ ಮುನ್ನ ದೇವೇಗೌಡರು ಮೆರಾಜ್ ಮನೆಯಲ್ಲಿ ವಾಸ್ತವ್ಯ ಮಾಡಿದ್ದರು. ಲೋಕಾಭಿರಾಮವಾಗಿ ಮಾತಿಗಿಳಿದ ಗೌಡರು 'ಪಾಪ ಹುಡುಗ, ಫ್ಯಾಕ್ಟರಿ ಅದು, ಇದು ಅಂತ ಮಾಡಿ ನಷ್ಟದಲ್ಲಿದ್ದಾನೆ. ಅವನಿಗೆ ಸ್ವಲ್ಪ ಹೆಲ್ಪ್ ಆಗಲಿ ಅಂತ ಅಧ್ಯಕ್ಷ ಮಾಡಲಾಯಿತು. ಅದರಿಂದ ಪಾಟರ್ಿಗೂ ಸ್ವಲ್ಪ ಡಿವಿಡೆಂಡ್ ಬರತದ ಬರಲಿ ಬಿಡಿ' ಎಂದು ಮೆರಾಜ್ ಬಗ್ಗೆ ವಿವರಿಸಿದ್ದರು. ಇದನ್ನು ಹೇಳುವಾಗ ಮೆರಾಜ್ ಅಲ್ಲಿರಲಿಲ್ಲ. ಇದ್ದರೂ ಹೇಳಲು ಗೌಡರು ಹಿಂದೇಟು ಹಾಕುತ್ತಿರಲಿಲ್ಲ. ಮೆರಾಜ್ ಬೇಜಾರು ಮಾಡಿಕೊಳ್ಳುತ್ತಿರಲಿಲ್ಲ.

ಘೋಡವಾಡಿಯ ಸಂತನ ಸಮಾಧಿಯಿಂದ ತಮ್ಮ ಚುನಾವಣಾ ಪ್ರಚಾರ ಆರಂಭಿಸಿ ಹುಬ್ಬೇರುವಂತೆ ಮಾಡಿದ್ದ ಮೆರಾಜ್ ಅವರು ಈ ಬಾರಿ ಗೆಲುವು ತಮ್ಮದೇ ಎಂದು ಭಾವಿಸಿದ್ದರು. ಹಿಂದಿನ ಚುನಾವಣಾ ಸಭೆಗಳಲ್ಲಿ 'ಎದುರಾಳಿಗಳ ಓಟ್ ಕೌಂಟಿಂಗ್ ಒಂದರಿಂದ ಆರಂಭವಾದರೆ ನನ್ನ ಮತ ಎಣಿಕೆ 25 ಸಾವಿರದಿಂದ ಶುರುವಾಗುತ್ತದೆ' ಎಂದು ಹೇಳುತ್ತಿದ್ದ ಮೆರಾಜ್ ಪುನವರ್ಿಂಗಡಣೆಯ ನಂತರ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವಲ್ಲಿ ವಿಫಲರಾದರು. ತಮ್ಮ ಹುಟ್ಟೂರು ಮತ್ತು ಅತ್ಯಂತ ಪ್ರಬಲ ಹಳ್ಳಿಗಳು ಇರುವ ಪ್ರದೇಶ ಬೀದರ್ ದಕ್ಷಿಣ ಕ್ಷೇತ್ರಕ್ಕೆ ಸೇರಿದ್ದು ಗೊತ್ತಿದ್ದೂ 'ಹುಮನಾಬಾದ್ ಕ್ಷೇತ್ರ' ಎನ್ನುವ ಹೆಸರಿನ ವ್ಯಾಮೋಹಕ್ಕೆ ಬಿದ್ದು ಆಯ್ಕೆಯಲ್ಲಿ ಎಡವಿದರು. ಬೀದರ್ ದಕ್ಷಿಣ ಕ್ಷೇತ್ರದಿಂದ ಸ್ಪಧರ್ಿಸಿದ್ದರೆ ಮೆರಾಜ್ ಅವರನ್ನು ಸೋಲಿಸುವವರು ಯಾರೂ ಇರಲಿಲ್ಲ. 'ರೇ'ಗಳನ್ನು ಆಧರಿಸಿ ರಾಜಕಾರಣ ಮತ್ತು ಬದುಕು ನಡೆಯುವುದಿಲ್ಲ. ಸೋಲನ್ನು ಕೂಡ ಮೆರಾಜ್ ತಮ್ಮ ಎಂದಿನ ಸಹಜ ಧಾಟಿಯಲ್ಲಿ ಸ್ವೀಕರಿಸಿದರು. ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲೂ ಹೋಗಲಿಲ್ಲ.

ಒಮ್ಮೆ ಬಂದು ನಾಲ್ಕಾರು ದಿನ ಕಾದು ಕುಳಿತ ಯಮನ ಜೊತೆ ಹೆಣಗಾಡಿ ಮೃತ್ಯುಂಜಯನಾಗಿದ್ದ ಮೆರಾಜ್ ಅವರನ್ನು ಸೋಲಿಸುವಲ್ಲಿ 2008ರ ಅಕ್ಟೋಬರ್ 7ರಂದು ಮೃತ್ಯು ಯಶಸ್ವಿಯಾಯಿತು. ಅವರ ಸೋಲು ಮತ್ತು ಸಾವು ಜನಪ್ರಿಯ ಅಥವಾ ಜನಪರ ರಾಜಕಾರಣದ ಅಲ್ಲದಿದ್ದರೂ ರಾಜಕಾರಣಿಯ 'ಅಂತ್ಯ' ಎಂಬುದರಲ್ಲಿ ಎರಡು ಮಾತಿಲ್ಲ.. ಬಿಯರ್ಾನಿ ಪ್ರಿಯ ಮೆರಾಜ್ ಸಾಹೇಬರು ಇನ್ನಿಲ್ಲ ಎನ್ನುವುದನ್ನು ಮನಸ್ಸು ಒಪ್ಪಿಕೊಳ್ಳುತ್ತಿಲ್ಲ. ಮೆರಾಜ್ ಅವರಂತಹ ನೆಲಮಟ್ಟದ ಮತ್ತು ದಂತಗೋಪುರದಲ್ಲಿ ವಾಸಿಸದ, ರಾಜಕಾರಣದಲ್ಲಿ ಇದ್ದರೂ ಅಷ್ಟಾಗಿ ಕೊಳೆ ಮಾಡಿಕೊಳ್ಳದ ಮೆರಾಜ್ ಹುಮನಾಬಾದ್ ಜನರ ಮನಸ್ಸಿನಲ್ಲಿ ಎಷ್ಟು ದಿನ ಉಳಿಯುತ್ತಾರೆ? ನೋಡಬೇಕು.

No comments:

Post a Comment